Monday, January 10, 2011

visit to a few temples of kolar district

ಭಾನುವಾರ 09.01.2011   ಬೆಳಗ್ಗೆ ಬೇಗ ಅನ್ದ್ರೆ ೪:೪೫ಕ್ಕೆ ಎದ್ದು ಸ್ನಾನ ಮಾಡಿ ಆಹ್ನಿಕಗಳನ್ನು ಮುಗಿಸಿ ನವ್ಯ (ನನ್ನ ಮಗಳು) ನ್ನ ಎಬ್ಬಿಸಿ, ವಾಹನಕ್ಕಾಗಿ ಫೊನ್ ಮಾಡೊಸ್ಟರಲ್ಲಿ ಗೀತ (ನನ್ನ ಅರ್ಧ ಅಂಗಿ) ಬಿಸಿ ಬಿಸಿ ಬಿಸಿ ಬಿಸಿ ಕಾಪಿಯನ್ನು ತಂದು ಕೊಟ್ಟು ಕೇಸರಿಭಾತ್ ಮಾಡಲು ಹೋದಳು.  ಅಂತು ಇಂತು ಒನ್ದರ್ಧಘಂಟೆ ಕಾಯ್ದನಂತರ ಟಿಟಿ ಜನ (ಅಂದರೆ ಟೆಂಪಲ್ ಟ್ರೀಸ್ನಲ್ಲಿರೊ ನನ್ನ ಅಕ್ಕ ಭಾವ : ವನಮಾಲಿ, ಮರುತಿ ರಾವ್, ಕೆಸರನ್ಜನ್ರಾವ್ (ಶ್ರೀಧರ್), ನಿರ್ಮಲ  ಅವರ ಮಗಳು ರಶ್ಮಿ ಮತ್ತು ನನ್ನ ತಂಗಿ ಮಗಳು ಶ್ರೀಪ್ರಿಯ (ಪೂಜ) ಬನ್ದಿಳಿದರು. ಅವರ ಜೊತೆ ಇನ್ನೊಂದು ಸಲ ಕಾಪಿ ಕುಡಿದು ಎಲ್ಲರು ವಾಹನ ಹತ್ತಿ ಕುಳಿತು ಹೊರೆಟೆವು. ನಮ್ಮ ವಾಹನದ ಸಾರಥಿಯ ಹೆಸರು ಶಂಕರ್. ಶಂಕರ್ ಒಳ್ಳೆ ಹುಡುಗ, ಧೂಮಪಾನ, ಗುಟ್ಕ ಯಾವದು ಇಲ್ಲ.



Krishnarajapura hanging bridge

ಅಲ್ಲಿಂದ ನಮ್ಮ ಪಯಣ ನಾಗವಾರ ಕೆರೆ ಬಳಸಿಕೊಂಡು ರಿಂಗ್ ರಸ್ತೆ ಮಾರ್ಗವಾಗಿ ಕೃಷ್ಣರಾಜಪುರ ತೂಗುಸೇತುವೆ ಮೇಲಿಂದ ಹೊಸಕೋಟೆ ಕಡೆಗೆ." ಪ್ರಕಾಶ್ ನೋಡೋ ಎಷ್ಟು ಮಂಜು ಏಳು ಘಂಟೆ ಆದ್ರು ಅಂತ ಹೆಳಿದ್ದು "ಮಿ. ಮಾರುತಿ ರಾವ್. ಹೊಸಕೋಟೆ, ಕೋಲಾರ ಹೊರ ರಸ್ತೆ ಮೂಲಕ ರೈಲು ಹಳಿ ದಾಟಿದ ಬಳಿಕ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ  ಬಲಕ್ಕೆ ತಿರುಗಿ (ಎಡಕ್ಕೆ ಹೋದರೆ ಚೆನ್ನೈಗೆ ಹೋಗ್ತದೆ) ಬಂಗಾರಪೇಟೆ ಮಾರ್ಗವಾಗಿ ಬಿ.ಇ.ಎಂ.ಲ್ ನಗರವನ್ನು ಹಾಯ್ದು ಕಮ್ಮಸಂದ್ರವನ್ನು 8:45   ಕ್ಕೆ    ತಲುಪಿದೆವು. ಕಮ್ಮಸಂದ್ರದಲ್ಲಿರುವುದು ಕೋಟಿಲಿಂಗ. 

ಪ್ರವೇಶಕ್ಕೆ ಒಬ್ಬರಿಗೆ  ಹತ್ತು ರೂಪಾಯಿ ಮತ್ತು ಕ್ಯಾಮರಾಗೆ ನೂರು ರೂಪಾಯಿ. ಸ್ವಲ್ಪ ಜಾಸ್ತಿ ಅನ್ನಿಸ್ತು.  ನಿಜಕ್ಕು ಕೋಟಿ ಲಿಂಗ (ಸುಮಾರು ತೊಂಬತ್ತು ಲಕ್ಷ ಇದೆಯಂತೆ). ಇಲ್ಲಿ ಮೊದಲ ಶಿವಲಿಂಗ ಪ್ರತಿಸ್ಟಾಪಿಸಿದ್ದು 1974 ರಲ್ಲಿ.   ಚಿಕ್ಕ ಚಿಕ್ಕ ಲಿಂಗಗಳ ಮಧ್ಯೆ ಗಣೇಶ, ವೆಂಕಟೇಶ್ವರ ಮತ್ತು ಬೇರೆ ದೇವಸ್ಥಾನಗಳನ್ನು ಕಾಣಬಹುದು. ಮುಂದೆ ಹೋದರೆ, ಕಾಣಸಿಗುವುದು ಬೃಹದಾಕಾರವಾದ ಶಿವಲಿಂಗ. ಅದು ಸುಮಾರು ನೂರೆಂಟು ಅಡಿ ಎತ್ತರ ಇದೆ. ಅದರ ಎದುರುಗಡೆ ಸ್ವಲ್ಪ ದೂರದಲ್ಲಿದೆ ಬೃಹದಾಕಾರದ ನಂದಿ. ಎರಡು ನೂಡಲು ತುಂಬ ಚೆನ್ನಾಗಿವೆ. 

ಹತ್ತು ವರ್ಷದ ಹಿಂದೆ ಹೋದಾಗ  ಕೋಟಿಲಿಂಗ ಇದ್ದದ್ದು ಪ್ರಕೃತಿಯ ನಡುವೆ ಆದರೆ ಇಂದು ಇರುವುದು ಅಂಗಡಿ/ಹೋಟ್ಲುಗಳ ನಡುವೆ. ತುಂಬ ಬೇಸರವಾಯಿತು. ಏನ್ ಮಾಡೊದು ಎಲ್ಲಾ ಅಭಿವೃದ್ಧಿ ! ! ! 

Kotilinga - Kammasandra Vehicle Parking 

Kotilinga





ಅಷ್ಟೊತ್ತಿಗಾಗಲೆ ಎಲ್ಲರೂ ತಿಂಡಿ ತಿನ್ಬೇಕು ಅಂದಿದ್ದರಿಂದ.....ದಾರಿಯಲ್ಲಿ ನೆರಳಿರುವ ಜಾಗ ನೋಡಿ ಶಂಕರ್ ವಾಹನವನ್ನು ನಿಲ್ಲಿಸಿದ. ಕೆಳಗೆ ಇಳಿದು ನೊಡಿದ್ರೆ ಮರದಮೇಲೆ ನಮ್ಮ ಪೂರ್ವಜರು ! ! ! ಅದಕ್ಕೆ ವಾಹನದಲ್ಲೇ ಕೂತು ಎಲ್ರೂ ಕೆಸರಿಬಾತ್ ಉಪ್ಪಿಟ್ಟು, ನಿಂಬೇಹಣ್ಣಿನ   ಚಟ್ನಿ ತಿಂದು ಆನಂದ ಪ್ರಾಪ್ತಿಹೊಂದಿದರು (ನಮ್ಮ ಮಿಲಿಟ್ರಿ ಮಾವ ಶೀನನ ಡೈಲೊಗ್).

 




ಅಲ್ಲಿಂದ ನೇರ ಬಂಗಾರು ತಿರುಪತಿಗೆ.... ಅದು ಇರೋದು ಗುಟ್ಟಹಳ್ಳಿ ಅನ್ನೊ ಹಳ್ಳಿಯಲ್ಲಿ... ದೊಡ್ಡ ದೊಡ್ಡ ಮರಗಳು, ಎಲ್ಲಾಕಡೆ ನೆರಳು, ಒಂಥರ ಮನಸ್ಸಿಗೆ ಮುದನೀಡುವಂಥಹ ವಾತಾವರಣ ನಮ್ಮನ್ನು ಸ್ವಾಗತಿಸಿತು. 



ಸ್ವಾಗತಗೋಪುರದ ಒಳಗೆ ಹೋದರೆ, ಅಲ್ಲೊಂದು ಕಲ್ಯಾಣಿ. ಮುಜರಾಯಿ ಇಲಾಖೆಗೆ ಸೇರಿದ್ದರಿಂದ ಸ್ವಛ್ಛತೆಯನ್ನು ಕಾಪಾಡಿಲ್ಲ...ನೀರಿನಲ್ಲಿ ಪಾಚಿ ಕಟ್ಟಿದೆ...ಕಸ ಇದೆ, ಸ್ವಛ್ಛಮಾಡೋದೇ ಇಲ್ಲ ಅಂತ ಅನ್ನಿಸುವುದು ಸಹಜ. ಕಲ್ಯಾಣಿಯನ್ನು ಬಳಸಿಕೊಂಡು ಹೋದರೆ ಮೇಲೆ ಹೋಗಲು ಮೆಟ್ಟಿಲು ಇವೆ. ಅರ್ಧ ಬೆಟ್ಟ ಹತ್ತಿದಮೇಲೆ ಗವಿ ಆಂಜನೇಯಸ್ವಾಮಿ ದರ್ಶನ. ಅಲ್ಲಿಂದ ಪುನ್ಹ ಮೇಲೆ ಹೋದರೆ ತಲೆಯಮೇಲೆ ದೊಡ್ಡಾದಾದ ಗರುಡ ಪ್ರತ್ಯಕ್ಷ. 

Gopura - Bangaru Tirupathi Temple, Guttahalli 






ಗರುಡನ ಕೆಳಗಡೆಯಿಂದ ಮೆಟ್ಟಿಲು  ಹತ್ತಿ ಹೊದರೆ ನೇರ ಶ್ರೀನಿವಾಸದೇವರ ದೆವಸ್ಥಾನಕ್ಕೆ ಪ್ರವೇಶ. ದೇವರನ್ನು ನೋಡಲು ಇಲ್ಲಿ ಆರು ರಂಧ್ರಗಳಿರುವ ಕಿಂಡಿ ಇದೆ. ಇದನ್ನು ನೋಡಿದರೆ, ಉಡುಪಿ ನೋಡಿದವರಿಗೆ ನವಗ್ರಹ ಕಿಂಡಿ ನೆನಪಾಗುತ್ತದೆ. ಇದು ಇಲ್ಲಿಯ ಅತಿ ಎತ್ತರವಾದ ಜಾಗ. ಇಲ್ಲಿಂದ ಕಲ್ಯಾಣಿ, ಪ್ರವೇಶ ಗೋಪುರ ಎಲ್ಲಾ ನೋಡಲು ಒಂದು ರಮಣೀಯ ದೃಶ್ಯ. 


Lord Venkateshwara at Bangaru Tirupathi


View from top


ದರ್ಶನ ಮಾಡಿ ಕೆಳಗೆ ಇಳಿದು ಬಂದು...ಎದುರುಗಡೆ ಇರುವ ಇನ್ನೊಂದು ಬೆಟ್ಟ ಹತ್ತಿದ್ರೆ (ಸುಮಾರು ೫೦ ಮೆಟ್ಟಿಲು) ಅಲ್ಲಿ ಶ್ರಿ ಲಕ್ಷ್ಮಿ ದೇವಸ್ಥಾನ. ಅಲ್ಲಿಂದ ಕೆಳಗೆ ಬಂದ್ರೆ ಕುಡಿಯಲು ಸವಿಯಾದ ಎಳೆನೀರು. ಆ ನಂತರ ನಮ್ಮ ಪಯಣ ಶೀ ನರಸಿಂಹತೀರ್ಥದ ಕಡೆಗೆ. ದಾರಿಯಲ್ಲಿ ಆವನಿ ಬೆಟ್ಟ ಎಡಗಡೆಗೆ ದೂರದಲ್ಲಿ ಕಾಣಸಿಗುತ್ತದೆ. 





ರಾಷ್ತ್ರೀಯ ಹೆದ್ದಾರಿ ತಲುಪಿದಮೇಲೆ...ಬಲಕ್ಕೆ ತಿರುಗಿ (ಚೆನ್ನೈ ಮುಖವಾಗಿ)ಹೋದರೆ ನರಸಿಂಹತೀರ್ಥ ಕೇವಲ 2 ಕಿ.ಮಿ. ಅಷ್ಟೆ. 
ನರಸಿಂಹತೀರ್ಥದ ಕಲ್ಯಾಣಿಯಲ್ಲಿ ಕೈಕಾಲ್ತೊಳೆದು ಶ್ರೀಪಾದರಾಜರ, ಪದ್ಮನಾಭತೀರ್ಥರ ದರ್ಶನ ಮಾಡಿ, ಅಲ್ಲಿಂದ ಮೇಲೆ ಹೋಗಿ ಪ್ರಾಣದೇವರು, ನರಸಿಂಹದೇವರ ದರ್ಶನ, ಗಣೇಶ, ಹನುಮಭೀಮಮಧ್ವರ ದರ್ಶನ ಪಡೆದು, ಮಹಾಮಂಗಳಾರತಿಯ ನಂತರ ತೀರ್ಥಪ್ರಾಸಾದ - ಗೊಜ್ಜು, ಕೊಸಂಬರಿ, ಹುರಳಿಕಾಯಿ ಪಲ್ಯ, ಕುಂಬಳಕಾಯಿ ಪಲ್ಯ, ಹುಗ್ಗಿ (ಧನುರ್ಮಾಸ) ಪಾಯಸ, ಅನ್ನ, ಹುಳಿ, ಸಾರು, ಹಯಗ್ರೀವ, ಮೊಸರು... ನಂತರ ಸ್ವಲ್ಪ ಸುಧಾರಿಸಿಕೊಂಡು... ನರಸಿಂಹತೀರ್ಥದ ಕಲ್ಯಾಣಿಯ ಮೆಟ್ಟಿಲುಗಳಮೇಲೆ ಸ್ವಲ್ಪ ಹೊತ್ತು ಕೂತು ಸ್ವಛ್ಛಂದವಾಗಿ ಈಜುತ್ತಿರುವ ಮೀನುಗಳನ್ನು ನೋಡಿ ...     ನಮ್ಮ ಪಯಣ ಕುರುಡುಮಲೆ (ಕೂಡುಮಲೆ) ಗಣೇಶನ ದರ್ಶನಕ್ಕೆ...
ನರಸಿಂಹತೀರ್ಥ ಶ್ರೀ ಶ್ರೀಪಾದರಾಜರ ಮಠದ ದೂರವಾಣಿ : +91 8159  290839
ವಿ.ಸೂ.:  ಸೇವಾಕರ್ತರು ಮುಂಚಿತವಾಗಿ ದೂರವಾಣಿ ಮೂಲಕ ವಿವರಗಳನ್ನು ತಿಳಿದುಕೊಳ್ಳುವುದು ಸೂಕ್ತ


Sri Narasimha Teertha, Mulbagal 




ಮುಳಬಾಗಿಲಿಂದ ಬೆಂಗಳೂರು ರಸ್ತೆಯಲ್ಲಿ, ರಾಷ್ತ್ರೀಯ ಹೆದ್ದಾರಿ ಸಿಗುವ ಒಂದು ಕಿ.ಮಿ. ಮುಂಚೆ ಬಲಕ್ಕೆ ತಿರುಗಿದರೆ... ಕುರುಡುಮಲೆ ದಾರಿ...ಅಲ್ಲಿಂದ ಸುಮಾರು ೧೨ ಕಿ.ಮಿ. ಕುರುಡುಮಲೆ ಒಂದು ಚಿಕ್ಕ ಗ್ರಾಮ. ಗ್ರಾಮದ ಕೊನೆಯಲ್ಲಿ, ಬೆಟ್ಟದ ತಪ್ಪಲಿನಲ್ಲಿ ಸಾಲಿಗ್ರಾಮ ಶಿಲೆಯಲ್ಲಿ ಮಾಡಿರುವಂಥ ಸುಂದರ ಮೂರ್ತಿ. 

Kurudumale Sri Vinayaka Devasthana



ನಂತರ ನಮ್ಮ ಪಯಣ ಬೆಂಗಳೂರು ಕಡೆಗೆ...ರಾಷ್ಟ್ರೀಯ ಹೆದ್ದಾರಿ ೪ ಮಾರ್ಗವಾಗಿ.....  


Bangalore to Kammasandra (Kotilinga) 95kms
Kammasandra to Bangaru Tirupathi 10kms
Bangaru Tirupathi to Sri Narasimha Teertha (Mulbagal) 20kms
Sri Narasimha Teertha (Mulbagal) to Kurudumale 14kms
Kurudumale to Bangalore 105kms